ಕುಮಾರವಿಷ್ಣು

 ಪಲ್ಲವ ಸಂತತಿಯಲ್ಲಿ ಈ ಹೆಸರಿನ ಮೂವರು ರಾಜರಿದ್ದರು. ಓಂಗೋಡು, ಚಂದಲೂರು, ವೇಲೂರು, ಪಾಳಯಂ ಮೊದಲಾದ ಸ್ಥಳಗಳಲ್ಲಿ ಸಿಕ್ಕಿರುವ, ಪಲ್ಲವರ ಸಂಸ್ಕøತ ಭಾಷೆಯ ತಾಮ್ರಶಾಸನಗಳಲ್ಲಿ ಬರುವ, ಪಲ್ಲವರಾಜರ ವಂಶಾನುಕ್ರಮಣಿಕೆಯಲ್ಲಿ ಈ ಹೆಸರುಗಳು ಕಾಣಬರುತ್ತವೆ. ಇವರು ಸಿಂಹವಿಷ್ಣುವಿಗಿಂತ ಹಿಂದೆ ಆಳಿದವರು. ಇವರ ಕಾಲ ಮತ್ತು ಸಾಧನೆಗಳ ಬಗ್ಗೆ ಹೆಚ್ಚು ವಿವರಗಳಿಲ್ಲ. 1ನೆಯ ಕುಮಾರವಿಷ್ಣು ಇವರಲ್ಲಿ ಮೊದಲಿಗ. ಕುಮಾರವಿಷ್ಣುವಿಗೆ ಅಶ್ವಮೇಧಿನ್ ಎಂಬ ಬಿರುದು ಇದ್ದುದಾಗಿಯೂ ತಿಳಿದುಬರುತ್ತದೆ. ಇವನ ಆಳ್ವಿಕೆ ಅವಧಿ ಸು.350-370. 2ನೆಯ ಕುಮಾರವಿಷ್ಣು ಸುಮಾರು 510ರಲ್ಲಿ ನಂದಿವರ್ಮನ ತರುವಾಯ ಸಿಂಹಾಸನಕ್ಕೆ ಬಂದ. ಕಂಚಿ ಆ ಕಾಲದಲ್ಲಿ ಪಲ್ಲವರ ಕೈ ಬಿಟ್ಟುಹೋಗಿದ್ದುದಾಗಿಯೂ ಅದನ್ನು ಪುನಃ 2ನೆಯ ಕುಮಾರವಿಷ್ಣು ವಶಪಡಿಸಿಕೊಂಡನೆಂದೂ ತಿಳಿದುಬರುತ್ತದೆ. ಈತ 510 ರಿಂದ 530 ಆಳಿರಬಹುದು. 3ನೇ ಕುಮಾರವಿಷ್ಣು ಇವರ ಮೊಮ್ಮಗ. ಸಂಸ್ಕøತ ಶಾಸನಗಳಲ್ಲಿ ಉಲ್ಲೇಖಿತರಾದ. ಪಲ್ಲವರಲ್ಲಿ ಕಡೆಯವ. ಈತ ಸು. 540ರಿಂದ 10 ವರ್ಷಕಾಲ ಆಳಿದಂತೆ ಕಾಣಬರುತ್ತದೆ.

 

(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ